ಛತ್ತೀಸಗಡ: ಟ್ರಕ್‌ಗೆ ಬಸ್ ಡಿಕ್ಕಿ, ಏಳು ಮಂದಿ ಸಾವು

 

ಕೊರಬಾ: ಛತ್ತೀಸಗಡದ ಕೊರಬಾ ಜಿಲ್ಲೆಯಲ್ಲಿ ನಿಂತಿದ್ದ ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.

ಖಾಸಗಿ ಟ್ರಾವೆಲ್ ಕಂಪನಿಗೆ ಸೇರಿದ ಬಸ್ ಛತ್ತೀಸಗಡ ರಾಜಧಾನಿ ರಾಯ್‌ಪುರದಿಂದ ಸರ್‌ಗುಜ ಜಿಲ್ಲೆಗೆ ಸಂಚರಿಸುತ್ತಿತ್ತು.

ಬಂಗೋ ಪೊಲೀಸ್ ಠಾಣೆ ವ್ಯಾಪ್ತಿಯ ಮಡಾಯಿ ಘಾಟಿ ಬಳಿ ಸುಮಾರು 4 ಗಂಟೆಗೆ ಅವಘಡ ಸಂಭವಿಸಿದೆ ಎಂದು ಕೊರಬಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಮುಂಭಾಗದಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಯತ್ನಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ನಿಲ್ಲಿಸಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಲ್ಲಿ ಏಳು ಮಂದಿ ಬಸ್ ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾ ಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Post a Comment

Previous Post Next Post