ಬೆಂಗಳೂರಿನ ಫ್ರೇಜರ್ ಟೌನ್‌ನ ಪ್ರೊಮೆನೇಡ್ ರಸ್ತೆಯಲ್ಲಿರುವ ಪ್ರಮುಖ ಕಾನ್ವೆಂಟ್‌ನ ಹೊರಗೆ ಬುಧವಾರ ಮಧ್ಯಾಹ್ನ ಮೂವರು ಪ್ರೌಢಶಾಲಾ ವಿದ್ಯಾರ್ಥಿನಿಯರ ಪೋಷಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದು, ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ...
ಸಾಂದರ್ಭಿಕ ಚಿತ್ರ
ಬೆಂಗಳೂರು: ಬೆಂಗಳೂರಿನ ಫ್ರೇಜರ್ ಟೌನ್‌ನ ಪ್ರೊಮೆನೇಡ್ ರಸ್ತೆಯಲ್ಲಿರುವ ಪ್ರಮುಖ ಕಾನ್ವೆಂಟ್‌ನ ಹೊರಗೆ ಬುಧವಾರ ಮಧ್ಯಾಹ್ನ ಮೂವರು ಪ್ರೌಢಶಾಲಾ ವಿದ್ಯಾರ್ಥಿನಿಯರ ಪೋಷಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದು, ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.
ಸೆಪ್ಟೆಂಬರ್ 6 ರಂದು ತಮ್ಮ ಮಕ್ಕಳು ನಾಪತ್ತೆಯಾಗಿದ್ದು, ಅವರು ಎಲ್ಲಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಅಥವಾ ಶಾಲೆಯವರು ಮಕ್ಕಳ ಪತ್ತೆಗೆ ಸಹಾಯ ಮಾಡುತ್ತಿಲ್ಲ ಎಂದು ಪುಲಕೇಶಿನಗರ ಪೊಲೀಸರಿಗೆ ದೂರು ನೀಡಿರುವ ಪೋಷಕರು ಆರೋಪಿಸಿದ್ದಾರೆ.
ಮೂವರು ಬಾಲಕಿಯರ ಪೈಕಿ ಇಬ್ಬರು 9ನೇ ತರಗತಿ ಓದುತ್ತಿದ್ದರೆ, ಒಬ್ಬ ವಿದ್ಯಾರ್ಥಿನಿ 10ನೇ ತರಗತಿ ಓದುತ್ತಿದ್ದಾರೆ. ಈ ಪೈಕಿ ಇಬ್ಬರು ಬಾಲಕಿಯರು ಶಾಲೆಯ ಹಾಸ್ಟೆಲ್‌ನಲ್ಲಿ ವಾಸವಾಗಿದ್ದರು. ತಮ್ಮ ಮಕ್ಕಳಿಗೆ ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕರು "ಸ್ಲಂ ಜನ" ಎಂದು ಅವಮಾನಿಸಿರುವುದಾಗಿ ಪೋಷಕರು ಆರೋಪಿಸಿದ್ದಾರೆ. ಆದರೆ, ಬಾಲಕಿಯರು ಮನೆಯಲ್ಲಿ ಸಮಸ್ಯೆಗಳಿದ್ದು, ಓದಲು ಆಸಕ್ತಿ ಇಲ್ಲ ಎಂದು ಚೀಟಿ ಬರೆದಿಟ್ಟು ಹೋಗಿದ್ದಾರೆ ಎನ್ನಲಾಗಿದೆ.
ವಿದ್ಯಾರ್ಥಿನಿಯರು ಬರೆದ ಪತ್ರ ಹಾಸ್ಟೆಲ್‌ನಲ್ಲಿದಿಯೋ ಅಥವಾ ಅವರ ಮನೆಗಳಲ್ಲಿ ಇದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವಿದ್ಯಾರ್ಥಿಗಳನ್ನು ಹಾಸ್ಟೆಲ್ ಆವರಣದಿಂದ ಹೊರಗೆ ಹೋಗಲು ಬಿಡುವ ಮೂಲಕ ಶಾಲೆ ನಿರ್ಲಕ್ಷ್ಯ ವಹಿಸಿದೆ ಎಂದು ಪೋಷಕರು ಆರೋಪಿಸಿದ್ದಾರೆ.
“ಕಾಣೆಯಾದ ಬಾಲಕಿಯರ ಹುಡುಕಾಟಕ್ಕಾಗಿ ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಒಂದು ತಂಡ ವೇಲಂಕಣಿಗೆ, ಒಂದು ತಂಡ ಕೇರಳಕ್ಕೆ, ಮತ್ತೊಂದು ತಂಡ ತಮಿಳುನಾಡಿನ ಇತರ ಭಾಗಗಳಿಗೆ ತೆರಳಿದೆ' ಎಂದು ಪೊಲೀಸರು ತಿಳಿಸಿದ್ದಾರೆ.
Post a Comment