ಇಶ್ರಾತ್ ಜಹಾನ್ ಪ್ರಕರಣಕ್ಕೆ ಸಂಬಂಧಿಸಿದ ಐಪಿಎಸ್ ಅಧಿಕಾರಿ ವಜಾಗೆ ಒಂದು ವಾರಗಳ ಕಾಲ ಸುಪ್ರೀಂ ತಡೆ

 ಇಶ್ರಾತ್ ಕಹಾನ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಸಿಬಿಐ ಗೆ ನೆರವಾಗಿದ್ದ ಗುಜರಾತ್ ಕೇಡರ್ ನ ಐಪಿಎಸ್ ಅಧಿಕಾರಿ ಸತೀಶ್ ಚಂದ್ರ ವರ್ಮಾಗೆ ದೊಡ್ಡ ರಿಲೀಫ್ ಸಿಕ್ಕಿದ್ದು, ಅವರನ್ನು ಸೇವೆಯಿಂದ ವಜಾಗೊಳಿಸಿದ್ದ ಗೃಹ ಸಚಿವಾಲಯದ ಆದೇಶಕ್ಕೆ ಸುಪ್ರೀಂ ಕೋರ್ಟ್ 7 ದಿನಗಳ ತಡೆ ನೀಡಿದೆ.

                 ಐಪಿಎಸ್ ಅಧಿಕಾರಿ ಸತೀಶ್ ವರ್ಮಾ ಹಾಗೂ ಇಶ್ರಾತ್ ಜಹಾನ್ (ಸಂಗ್ರಹ ಚಿತ್ರ)

By : Rekha.M
Online Desk

ಇಶ್ರಾತ್ ಕಹಾನ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಸಿಬಿಐ ಗೆ ನೆರವಾಗಿದ್ದ ಗುಜರಾತ್ ಕೇಡರ್ ನ ಐಪಿಎಸ್ ಅಧಿಕಾರಿ ಸತೀಶ್ ಚಂದ್ರ ವರ್ಮಾಗೆ ದೊಡ್ಡ ರಿಲೀಫ್ ಸಿಕ್ಕಿದ್ದು, ಅವರನ್ನು ಸೇವೆಯಿಂದ ವಜಾಗೊಳಿಸಿದ್ದ ಗೃಹ ಸಚಿವಾಲಯದ ಆದೇಶಕ್ಕೆ ಸುಪ್ರೀಂ ಕೋರ್ಟ್ 7 ದಿನಗಳ ತಡೆ ನೀಡಿದೆ.

ನ್ಯಾ.ಕೆಎಂ ಜೋಸೆಫ್, ಹೃಷಿಕೇಶ್ ರಾಯ್ ಅವರಿದ್ದ ಪೀಠ ವರ್ಮಾಗೆ ವಜಾ ಆದೇಶವನ್ನು ದೆಹಲಿ ಹೈಕೋರ್ಟ್ ನಲ್ಲಿ ಬಾಕಿ ಇರುವ ಕಲಾಪಗಳಲ್ಲಿ ಪ್ರಶ್ನಿಸುವುದಕ್ಕೂ ಅವಕಾಶ ನೀಡಿದೆ.

ಅರ್ಜಿದಾರರನ್ನು ವಜಾಗೊಳಿಸಿದ್ದ ಎಂಎಚ್ಎ ಆದೇಶಕ್ಕೆ ಇಂದಿನಿಂದ ಒಂದು ವಾರಗಳ ಕಾಲ ತಡೆ ನೀಡಲಾಗುತ್ತಿದೆ. ಒಂದು ವಾರದ ವರೆಗೆ ಎಂಎಚ್ಎ ಆದೇಶವನ್ನು ಒಂದು ವಾರದ ವರೆಗೆ ಜಾರಿಗೊಳಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಒಂದು ವಾರದ ನಂತರ ಆದೇಶವನ್ನು ಜಾರಿಗೊಳಿಸಬೇಕೇ? ಅಥವಾ ಬೇಡವೇ ಎಂಬುದರ ಬಗ್ಗೆ ಹೈಕೋರ್ಟ್ ನಿರ್ಧರಿಸಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸೆ.30 ರಂದು ನಿವೃತ್ತರಾಗಬೇಕಿದ್ದ ವರ್ಮಾ ಅವರನ್ನು ಆ.30 ರಂದು ವಜಾಗೊಳಿಸಲಾಗಿತ್ತು. ಈ ಆದೇಶವನ್ನು ಅವರು ದೆಹಲಿ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು ಆದರೆ ಹೈಕೋರ್ಟ್ ಗೃಹ ಸಚಿವಾಲಯಕ್ಕೆ ವರ್ಮಾ ಅವರನ್ನು ವಜಾಗೊಳಿಸಲು ಅನುಮತಿ ನೀಡಿತ್ತು. ಆದರೆ ಸೆ.19 ವರೆಗೆ ಎಂಹೆಚ್ಎ ವಜಾ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿ ಪೊಲೀಸ್ ಅಧಿಕಾರಿಗೆ ಕಾನೂನು ಪ್ರಕಾರ ಪಡೆಯಬಹುದಾದ ಪರಿಹಾರಗಳನ್ನು ಪಡೆಯಲು ಅವಕಾಶ ಮಾಡಿಕೊಟ್ಟಿತ್ತು.

Post a Comment

Previous Post Next Post