ಅಮೇರಿಕಾದ ವಿಶ್ವವಿದ್ಯಾನಿಲಯದಲ್ಲಿ ಸಿಗದ ಪ್ರವೇಶ: ಮನನೊಂದ ವಿದ್ಯಾರ್ಥಿ ಆತ್ಮಹತ್ಯೆ

 22 ವರ್ಷದ ಆರ್ಕಿಟೆಕ್ಚರ್ ಪದವೀಧರರೊಬ್ಬರು ಉನ್ನತ ವ್ಯಾಸಂಗಕ್ಕಾಗಿ ಯುಎಸ್‌ನ ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಸಿಗಲಿಲ್ಲ ಎಂಬ ಅಸಮಾಧಾನದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

   ಸಾಂದರ್ಭಿಕ ಚಿತ್ರ

By : Rekha.M
Online Desk

ಬೆಂಗಳೂರು: 22 ವರ್ಷದ ಆರ್ಕಿಟೆಕ್ಚರ್ ಪದವೀಧರರೊಬ್ಬರು ಉನ್ನತ ವ್ಯಾಸಂಗಕ್ಕಾಗಿ ಯುಎಸ್‌ನ ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಸಿಗಲಿಲ್ಲ ಎಂಬ ಅಸಮಾಧಾನದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಾಗಡಿ ಮುಖ್ಯರಸ್ತೆಯ ವಾಸವಿ ಬೀದಿಯಲ್ಲಿ ಗುರುವಾರ ಬೆಳಗ್ಗೆ ಈ ಘಟನೆ ನಡೆದಿದೆ. ಮಹಾಲಕ್ಷ್ಮಿ ಲೇಔಟ್ ನಿವಾಸಿ ಕೆ.ಸಾಯಿ ಸಾನ್ವಿತ್ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಬಿ.ಆರ್ಕ್ ಮುಗಿಸಿ ಅಮೆರಿಕದ ವಿವಿಧ ವಿಶ್ವವಿದ್ಯಾಲಯಗಳಿಗೆ ಅರ್ಜಿ ಸಲ್ಲಿಸಿದ್ದರು.

ತನ್ನ ಸ್ನೇಹಿತರೆಲ್ಲ ಅಲ್ಲಿ ಪ್ರವೇಶ ಪಡೆದಿದ್ದಕ್ಕೆ ಮನನೊಂದ ಆತ ಬೆಳಗ್ಗೆ 9.30ರಿಂದ 10 ಗಂಟೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾನ್ವಿತ್ ತಂದೆ ಕಿರಣ್ ಕುಮಾರ್ ಸಿಮೆಂಟ್ ವ್ಯಾಪಾರಿಯಾಗಿದ್ದು, ಪತ್ನಿ ಮತ್ತು ಮಗನನ್ನು ವಾಸವಿ ಸ್ಟ್ರೀಟ್‌ನಲ್ಲಿರುವ ಮನೆಗೆ ಡ್ರಾಪ್ ಮಾಡಿ ಅಂಗಡಿಗೆ ಹೋಗಿದ್ದರು.

ಸ್ವಲ್ಪ ಸಮಯದ ನಂತರ, ಕುಮಾರ್ ಅವರ ಮಗನ ಸಾವಿನ ಬಗ್ಗೆ ಅವರ ಹೆಂಡತಿಯಿಂದ ಕರೆ ಬಂದಿತು. ತಾನು ಖಿನ್ನತೆಗೆ ಒಳಗಾಗಿದ್ದೇನೆ ಎಂದು ಆತ್ಮಹತ್ಯೆ ಪತ್ರವನ್ನು ಬರೆದಿದ್ದಾನೆ. ಅವರ ಸಾವಿಗೆ ಯಾರೂ ಕಾರಣರಲ್ಲ ಎಂದು ಪತ್ರದಲ್ಲಿ ಬರೆದಿದ್ದಾರೆ.

Post a Comment

Previous Post Next Post