ಒತ್ತುವರಿ ವಿಚಾರದಲ್ಲಿ ಕಾನೂನು ಎಲ್ಲರಿಗೂ ಒಂದೇ ರೀತಿಯಲ್ಲಿ ಅನ್ವಯ ಆಗುತ್ತಾ? : ನಟಿ ರಮ್ಯಾ ಟ್ವೀಟ್‌

 

ಬೆಂಗಳೂರು: ಬಿಬಿಎಂಪಿ ಬಿಟ್ಟ ಬುಲ್ಡೋಜರ್ ಸಾಮಾನ್ಯ ಜನರ ಮನೆಗಳನ್ನು ಮಾತ್ರ ಕೆಡುವುತ್ತಿದೆ ಎನ್ನುವ ಆರೋಪ ಕೇಳಿ ಬಂದಿದ್ದು, ನಟಿ ರಮ್ಯಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಶ್ನೆ ಕೇಳಿದ್ದಾರೆ.

ಈ ತೆರವು ವಿಚಾರದಲ್ಲಿ ಉಳ್ಳವರಿಗೊಂದು, ಸಾಮಾನ್ಯ ಜನರಿಗೆ ಇನ್ನೊಂದು ನ್ಯಾಯ ಎಂಬ ಆರೋಪ ಕೇಳಿಬಂದಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ಪತ್ರಕರ್ತರೊಬ್ಬರು ಸೋಶಿ ಯಲ್ ಮೀಡಿಯಾದಲ್ಲಿ ಪೋಸ್ಟ್​ ಒಂದನ್ನ ಮಾಡಿದ್ದರು.

ಕಾನೂನು ರೂಪಿಸುವವರೇ ಕೆಲವರು ಕಾನೂನು ಮುರಿದಿದ್ದಾರೆ. ಈ ಪಟ್ಟಿಯಲ್ಲಿರೋದು ಬೆಂಗಳೂರಿನ ಪ್ರಮುಖ ಬಿಲ್ಡರ್ಸ್​. ನನಗೆ ಭರವಸೆ ಇದೆ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಎಲ್ಲರಿಗೂ ಕಾನೂನು ಒಂದೇ ರೀತಿಯಲ್ಲಿ ಅಪ್ಲೈ ಮಾಡುತ್ತಾರೆ ಎಂದು ತಿವಿದಿದ್ದಾರೆ.

ಕಾನೂನು ಎಲ್ಲರಿಗೂ ಒಂದೇ ರೀತಿಯಲ್ಲಿ ಅನ್ವಯ ಆಗುತ್ತಾ? ಒತ್ತುವರಿ ಮಾಡಿಕೊಂಡ ದೊಡ್ಡ ದೊಡ್ಡ ಬಿಲ್ಡರ್ಸ್​​ಗಳ ಮೇಲೆ ಕ್ರಮ ಆಗುತ್ತಾ ಎಂಬ ಅರ್ಥದಲ್ಲಿ ಟ್ವೀಟ್ ಮಾಡಿ ದ್ದಾರೆ.

ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಒತ್ತುವರಿ ಮಾಡಿಕೊಂಡ ಜಾಗಗಳನ್ನು ತೆರವುಗೊಳಿಸುವ ಕಾರ್ಯವನ್ನು ಬಿಬಿಎಂಪಿ ಮಾಡುತ್ತಿದೆ. ಈಗಾಗಲೇ ಹಲವು ಕಟ್ಟಡ ಗಳನ್ನು, ಗೋಡೆಗಳನ್ನು ಮತ್ತು ಕಾಂಪೌಂಡ್ ಕೆಡವುವ ಕೆಲಸದಲ್ಲಿ ಅಧಿಕಾರಿಗಳು ಬ್ಯುಸಿಯಾಗಿದ್ದಾರೆ.

ಪ್ರತಿಷ್ಠಿತ ಕಂಪನಿಗಳು, ಶಾಲಾ, ಕಾಲೇಜುಗಳು ಮತ್ತು ಪ್ರತಿಷ್ಠಿತ ಬಿಲ್ಡರ್ಸ್ ಮನೆಗಳು ಹಾಗೂ ಶಾಸಕರು ಮತ್ತು ಮಂತ್ರಿಗಳ ಒಡೆತನದ ಬಿಲ್ಡಿಂಗ್ ಗಳು ಕೂಡ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿವೆ. ಪ್ರಭಾವಿಗಳ ಮನೆಗೂ ಬುಲ್ಡೋಜರ್ ನುಗ್ಗುತ್ತದೆ ಎಂದು ನಾನು ಸಿಎಂ ಮೇಲೆ ಭರವಸೆ ಇಟ್ಟಿದ್ದೇನೆ. ಕಾನೂನು ಎಲ್ಲರಿಗೂ ಒಂದೇ’ ಎಂದು ನೆನಪಿಸಿದ್ದಾರೆ.




Post a Comment

Previous Post Next Post