ಬೆಂಗಳೂರು: ಆಡಿಟ್ ಬ್ಯೂರೊ ಆಫ್ ಸರ್ಕ್ಯುಲೇಶನ್ (ಎಬಿಸಿ) ಸಂಸ್ಥೆಯ 2022-23ನೇ ಸಾಲಿನ ಅಧ್ಯಕ್ಷರಾಗಿ ಸಕಾಳ್ ಮೀಡಿಯಾ ಪ್ರೈ. ಲಿಮಿಟೆಡ್‌ನ ಮುಖ್ಯಸ್ಥರಾದ ಪ್ರತಾಪ್ ಪವಾರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಕಾಳ್ ಮೀಡಿಯಾ ಪ್ರೈ.ಲಿಮಿಟೆಡ್ ಮರಾಠಿ ದಿನಪತ್ರಿಕೆ ಸಕಾಳ್‌ನ ಪ್ರಕಾಶನ ಸಂಸ್ಥೆ ಯಾಗಿದೆ. ಪ್ರತಾಪ್ ಪವಾರ್ ಅವರು ಪುಣೆಯ ಎಂಸಿಸಿಐಎ ಅಧ್ಯಕ್ಷರಾಗಿ, ರಾಷ್ಟ್ರಮಟ್ಟದ ಮತ್ತು ಅಂತರರಾಷ್ಟ್ರೀಯ ಮಟ್ಟದ ಹಲವು ಸಂಸ್ಥೆಗಳ ಆಡಳಿತ ಮಂಡಳಿ ಯ ಸದಸ್ಯ ರಾಗಿ ಸೇವೆ ಸಲ್ಲಿಸಿದ್ದಾರೆ.
ಜಾಹೀರಾತು ಸಂಸ್ಥೆ ಆರ್‌ಕೆ ಸ್ವಾಮಿ ಪ್ರೈ.ಲಿಮಿಟೆಡ್‌ನ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್ ಕೆ.ಸ್ವಾಮಿ ಅವರು ಎಬಿಸಿಯ ಉಪಾಧ್ಯಕ್ಷರಾಗಿ, ಹೊರ್ಮುಜ್ದ್ ಮಸಾನಿ ಪ್ರಧಾನ ಕಾರ್ಯದರ್ಶಿಯಾಗಿ, ಮಲಯಾಳ ಮನೋರಮಾ ಕಂಪನಿ ಲಿಮಿಟೆಡ್ ನ ರಿಯಾದ್ ಮ್ಯಾಥ್ಯೂ ಗೌರವ ಕಾರ್ಯದರ್ಶಿಯಾಗಿ ಮತ್ತು ಮ್ಯಾಡಿಸನ್ ಕಮ್ಯುನಿಕೇ ಷನ್ಸ್ ಪ್ರೈ. ಲಿಮಿಟೆಡ್‌ನ ವಿಕ್ರಂ ಸಖುಜಾ ಅವರು ಗೌರವ ಖಜಾಂಚಿಯಾಗಿ ಆಯ್ಕೆಯಾಗಿ ದ್ದಾರೆ.
ಪ್ರಕಾಶಕರ ಪ್ರತಿನಿಧಿಗಳಾಗಿ ದಿ ಬಾಂಬೆ ಸಮಾಚಾರ್ ಪ್ರೈ. ಲಿಮಿಟೆಡ್‌ನ ಹೊರ್ಮುಸ್‌ಜಿ ಎನ್.ಕಾಮಾ, ಜಾಗರಣ್ ಪ್ರಕಾಶನ್ ಲಿಮಿಟೆಡ್‌ನ ಶೈಲೇಶ್ ಗುಪ್ತಾ, ಎಚ್‌ಟಿ ಮೀಡಿಯಾ ಲಿಮಿಟೆಡ್‌ನ ಪ್ರವೀಣ್ ಸೋಮೇಶ್ವರ್, ಬೆನ್ನೆತ್ ಕೋಲ್ಮನ್ ಅಂಡ್ ಕಂಪನಿ ಲಿಮಿಟೆಡ್‌ನ ಮೋಹಿತ್ ಜೈನ್, ಎಬಿಪಿ ಪ್ರೈ. ಲಿಮಿಟೆಡ್‌ನ ಧ್ರುವ ಮುಖರ್ಜಿ, ಲೋಕಮತ್ ಮೀಡಿಯಾ ಲಿಮಿಟೆಡ್‌ನ ಕರಣ್ ದಾರ್ದ ಆಯ್ಕೆಯಾಗಿದ್ದಾರೆ.
ಜಾಹೀರಾತು ಸಂಸ್ಥೆಗಳ ಪ್ರತಿನಿಧಿಗಳಾಗಿ ಐಪಿಜಿ ಮೀಡಿಯಾ ಬ್ರ್ಯಾಂಡ್ಸ್-ಮೀಡಿಯಾ ಬ್ರ್ಯಾಂಡ್ಸ್ ಪ್ರೈ.ಲಿಮಿಟೆಡ್‌ನ ಶಶಿಧರ್ ಸಿನ್ಹಾ, ಗ್ರೂಪ್ ಎಂ ಮೀಡಿಯಾ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಪ್ರಶಾಂತ್ ಕುಮಾರ್ ಆಯ್ಕೆಯಾಗಿದ್ದಾರೆ.
ಜಾಹೀರಾತುದಾರರ ಪ್ರತಿನಿಧಿಗಳಾಗಿ ಯುನೈಟೆಡ್ ಬ್ರೆವರೀಸ್ ಲಿಮಿಟೆಡ್‌ನ ದೇವವ್ರತ ಮುಖರ್ಜಿ, ಐಟಿಸಿ ಲಿಮಿಟೆಡ್‌ನ ಕರುಣೇಶ್ ಬಜಾಜ್, ಟಿವಿಎಸ್ ಮೋಟರ್ ಕಂಪನಿ ಲಿಮಿಟೆಡ್‌ನ ಅನಿರುದ್ಧ ಹಲ್ದಾರ್, ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಶಶಾಂಕ್ ಶ್ರೀವಾಸ್ತವ ಆಯ್ಕೆಯಾಗಿದ್ದಾರೆ.
Post a Comment