ಪೊಂಜಿ ಯೋಜನೆಯಲ್ಲಿ (ವಂಚನೆಯ ಹೂಡಿಕೆ) ಸುಮಾರು 6 ಕೋಟಿ ರೂಪಾಯಿ ಹೂಡಿಕೆ ಮಾಡಿದ 600ಕ್ಕೂ ಹೆಚ್ಚು ಜನರನ್ನು ವಂಚಿಸಿದ ಆರೋಪದ ಮೇಲೆ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) ವ್ಯಕ್ತಿಯೊಬ್ಬನನ್ನು ಬಂಧಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಆರೋಪಿಯನ್ನು ಉತ್ತರ ಪ್ರದೇಶದ ಮೌ ಜಿಲ್ಲೆಯ ದೇವೇಂದ್ರ ಕುಮಾರ್ ಎಂದು ಗುರುತಿಸಲಾಗಿದೆ.
ಬಿಎಲ್‌ಎಸ್ ರಿಯಾಲ್ಟಿ ಇನ್‌ಫ್ರಾ ಇಂಡಿಯಾ ಲಿಮಿಟೆಡ್ ಮತ್ತು ಬಿಎಲ್‌ಎಸ್ ಕೋ-ಆಪರೇಷನ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕರು ಅಥವಾ ಪ್ರವರ್ತಕರು ಮಾಸಿಕ ಆದಾಯ, ನಿಶ್ಚಿತ ಠೇವಣಿ ಮತ್ತು ಗುಲ್ಲಕ್ ನಂತಹ ಯೋಜನೆಗಳನ್ನು ಪರಿಚಯಿಸಿದ್ದಾರೆ. ಇವುಗಳಲ್ಲಿ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ಉತ್ತಮ ಆದಾಯ ಪಡೆಯುವ ಭರವಸೆ ನೀಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಂಪನಿಗಳು ಆರಂಭದಲ್ಲಿ ಹೂಡಿಕೆದಾರರಿಗೆ ಆದಾಯವನ್ನು ಪಾವತಿಸಿವೆ. ಆದಾಗ್ಯೂ, 2017 ರಲ್ಲಿ ಇದು ಕೆಲವು ನೆಪಗಳನ್ನೊಡ್ಡಿ ಮೆಚ್ಯುರಿಟಿಯ ಪಾವತಿಗಳನ್ನು ನಿಲ್ಲಿಸಿದೆ. 2019 ರಲ್ಲಿ, ನಿರ್ದೇಶಕರು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ ಮತ್ತು ಕಚೇರಿಗಳನ್ನು ತೊರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಎಲ್ಎಸ್ ರಿಯಾಲ್ಟಿ ಇನ್‌ಫ್ರಾ ಇಂಡಿಯಾ ಕಂಪನಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಅರ್‌ಬಿಐ) ನಲ್ಲಿ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಯಾಗಿ (ಎನ್‌ಬಿಎಫ್‌ಸಿ) ಎಂದು ನೋಂದಾಯಿಸಿಲ್ಲ ಮತ್ತು ಬಿಎಲ್‌ಎಸ್ ಕೋ-ಆಪರೇಷನ್ ಕ್ರೆಡಿಟ್ ಸೊಸೈಟಿಯು ಸಾರ್ವಜನಿಕ ಠೇವಣಿಗಳನ್ನು ಸ್ವೀಕರಿಸಲು ದೆಹಲಿ ಸರ್ಕಾರದ ರಿಜಿಸ್ಟ್ರಾರ್ ಆಫ್ ಸೊಸೈಟೀಸ್ (ಸೆಂಟ್ರಲ್ ಡಿಸ್ಟ್ರಿಕ್ಟ್) ನಿಂದಲ ಅಧಿಕೃತಗೊಂಡಿಲ್ಲ ಎಂದು ತನಿಖೆಯಲ್ಲಿ ತಿಳಿದುಬಂದಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ.
2012ರಲ್ಲಿ ಕಂಪನಿಗಳು ತೆರೆದಾಗಿನಿಂದ ಧರ್ಮೇಂದರ್, ರಾಮ ಜನಮ್ ಭಾರತಿ ಮತ್ತು ದೇವೇಂದ್ರ ನಿರ್ದೇಶಕರಾಗಿದ್ದರು ಎಂದು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ.
ಧರ್ಮೇಂದರ್ ಮತ್ತು ಜನಮ್ ಭಾರತಿ ಅವರನ್ನು ಈ ಹಿಂದೆ ಬಂಧಿಸಿ ಆರೋಪಪಟ್ಟಿ ಸಲ್ಲಿಸಲಾಗಿದ್ದು, ದೇವೇಂದ್ರ ತಲೆಮರೆಸಿಕೊಂಡಿದ್ದ. ಮೌ ನಲ್ಲಿರುವ ಆತನ ನಿವಾಸದ ಮೇಲೆ ದಾಳಿ ನಡೆಸಿ ಬುಧವಾರ ಆತನನ್ನು ಬಂಧಿಸಲಾಗಿದೆ ಎಂದು ಅಪರಾಧ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ರವೀಂದ್ರ ಸಿಂಗ್ ಯಾದವ್ ತಿಳಿಸಿದ್ದಾರೆ.
ಈ ವ್ಯಕ್ತಿಗಳು ಕೆಲ ಕಾಲ ಹಣಕಾಸು ಮತ್ತು ಮಾರುಕಟ್ಟೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಸ್ಥಿರ ಠೇವಣಿ, ಶುಭ ವಿವಾಹ, ಕಿಸಾನ್ ವಿಕಾಸ್ ಪತ್ರ ಮತ್ತು ಗುಲ್ಲಕ್ ಯೋಜನೆ (ದೈನಂದಿನ ಯೋಜನೆ) ನಂತಹ ಯೋಜನೆಗಳನ್ನು ಬಳಸಿಕೊಂಡು ಏಜೆಂಟ್‌ಗಳ ಮೂಲಕ ಹಣವನ್ನು ಸಂಗ್ರಹಿಸಲು ಅವರು ಯೋಜಿಸಿದ್ದರು. ತಮ್ಮ ಏಜೆಂಟರ ಮೂಲಕವೇ ಹಣ ಹೂಡಿಕೆಯನ್ನು ಪಡೆದರು ಎಂದು ಯಾದವ್ ಹೇಳಿದರು.
Post a Comment