ಬೆಂಗಳೂರಲ್ಲಿ ರಾತ್ರಿಯಿಂದ ಬೆಳಗಿನವರೆಗೆ ಜಿಟಿಜಿಟಿ ಮಳೆ, 48 ಗಂಟೆಗಳ ಕಾಲ ಮುಂದುವರಿಕೆ: ಹವಾಮಾನ ಇಲಾಖೆ

 ನವರಾತ್ರಿಯ ಸಂಭ್ರಮದ ನಡುವೆ ಕಳೆದ ರಾತ್ರಿಯಿಂದ ರಾಜಧಾನಿ ಬೆಂಗಳೂರಿನಲ್ಲಿ ಜಿಟಿಜಿಟಿ ಮಳೆ ಸುರಿಯುತ್ತಿದ್ದು ಶನಿವಾರ ಬೆಳಗ್ಗೆ ಕಚೇರಿಗಳಿಗೆ, ಕೆಲಸಗಳಿಗೆ ತೆರಳುವವರಿಗೆ, ಶಾಲಾ-ಕಾಲೇಜಿಗೆ ಹೋಗುವ ಮಕ್ಕಳಿಗೆ ಸಂಚಾರಕ್ಕೆ ಕಷ್ಟವಾಯಿತು.

                   ಸಾಂದರ್ಭಿಕ ಚಿತ್ರ

By : Rekha.M
Online Desk

ಬೆಂಗಳೂರು: ನವರಾತ್ರಿಯ ಸಂಭ್ರಮದ ನಡುವೆ ಕಳೆದ ರಾತ್ರಿಯಿಂದ ರಾಜಧಾನಿ ಬೆಂಗಳೂರಿನಲ್ಲಿ ಜಿಟಿಜಿಟಿ ಮಳೆ ಸುರಿಯುತ್ತಿದ್ದು ಶನಿವಾರ ಬೆಳಗ್ಗೆ ಕಚೇರಿಗಳಿಗೆ, ಕೆಲಸಗಳಿಗೆ ತೆರಳುವವರಿಗೆ, ಶಾಲಾ-ಕಾಲೇಜಿಗೆ ಹೋಗುವ ಮಕ್ಕಳಿಗೆ ಸಂಚಾರಕ್ಕೆ ಕಷ್ಟವಾಯಿತು.

ಕಳೆದೆರಡು ದಿನಗಳಿಂದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿದ್ದು ಹಲವೆಡೆ ಮಳೆಯಾಗುತ್ತಿದೆ. ಉತ್ತರ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇಂದು ಸಹ ಮೋಡ ಕವಿದ ವಾತಾವರಣ (Cloudy Weather) ಇರಲಿದ್ದು, ಮಳೆಯಾಗುವ ನಿರೀಕ್ಷೆಗಳಿವೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ವ್ಯಾಪ್ತಿಯಲ್ಲಿಯೂ ಸಣ್ಣ ಮಟ್ಟಿನಲ್ಲಿ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಕರಾವಳಿ ಮತ್ತು ಮಲೆನಾಡು ಪರಿಸರದಲ್ಲಿ ಮಳೆಯ ಪ್ರಮಾಣ ಕೊಂಚ ಏರಿಕೆಯಾಗಿದೆ.  

ಬೆಂಗಳೂರಲ್ಲಿ ನಿನ್ನೆ ರಾತ್ರಿ ಆರಂಭವಾದ ಜಿಟಿ ಜಿಟಿ ಮಳೆ, ಮುಂಜಾನೆ ತನಕ ಸುರಿದಿದೆ. ಮೆಜಸ್ಟಿಕ್, ಕಾರ್ಪೋರೇಷನ್, ವಿಧಾನಸೌಧ, ಚಂದ್ರಾಲೇಔಟ್, ಆರ್ ಟಿ ನಗರ ಸೇರಿದಂತೆ ಹಲವೆಡೆ ಮಳೆ ಸುರಿದಿದ್ದು, ರಾತ್ರಿ ಮನೆಗೆ ಹೋಗಲು ಜನ ಪರದಾಡಿದರು. ಇಂದು ಸಹ ಬೆಂಗಳೂರಿನಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರು ನಗರದಲ್ಲಿ 18.2ಮಿ.ಮೀ ಮಳೆ ದಾಖಲಾಗಿದೆ.

ಇನ್ನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಕೂಡ ಬರುತ್ತಿದೆ. ಇಂತಹ ಹೊತ್ತಿನಲ್ಲಿ ಈ ವರ್ಷ ಭಾರೀ ಮಳೆ ಮುಂದವರಿದಿರುವುದು ಜನರು ಹಿಡಿಶಾಪ ಹಾಕುತ್ತಿದ್ದಾರೆ.



Post a Comment

Previous Post Next Post