*ಶಿವಮೊಗ್ಗದಲ್ಲಿ ದಾಖಲೆಯ ಯೋಗಥಾನ್-2022 : ಡಾ.ಸೆಲ್ವಮಣಿ.ಆರ್*

 ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಯೋಗವನ್ನು ಯುವಜನರಲ್ಲಿ ಪ್ರಚುರಪಡಿಸುವುದು ಹಾಗೂ ಗಿನ್ನಿಸ್ ದಾಖಲೆ ನಿರ್ಮಿಸುವ ಉದ್ದೇಶದಿಂದ ಸೆ.17 ರಂದು ಶಿವಮೊಗ್ಗದಲ್ಲಿ ಯೋಗಥಾನ್-2022 ಕಾರ್ಯಕ್ರಮ ನಡೆಯಲಿದ್ದು, ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ತಿಳಿಸಿದರು.



      ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ‘ಯೋಗಥಾನ್ 2022’ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿ, ಸರ್ಕಾರ ಸೆ.17 ರಂದು ರಾಜ್ಯದ 25 ಕೇಂದ್ರಗಳಲ್ಲಿ ಏಕ ಕಾಲದಲ್ಲಿ ಸುಮಾರು 5 ಲಕ್ಷ ಜನರನ್ನು ಸೇರಿಸಿ ದಾಖಲೆಯ ಯೋಗಾಭ್ಯಾಸ ಆಯೋಜಿಸಿದೆ.
     ಜಿಲ್ಲಾಡಳಿತ, ಜಿ.ಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಆಯುಷ್ ಇಲಾಖೆ, ಆಯುಷ್ ಟಿ.ವಿ, ಮಿರಾಕಲ್ ಡ್ರಿಂಕ್ಸ್, ಕೆಎಂಎಫ್ ಇವರ ಸಹಯೋಗದಲ್ಲಿ ಯೋಗಥಾನ್ ಸಂಘಟಿಸಲಾಗಿದ್ದು, ಈ ಕಾರ್ಯಕ್ರಮದ ಯಶಸ್ವಿ ಸಂಘಟನೆಗಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನೊಳಗೊಂಡ ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿ ವಹಿಸಲಾಗಿದೆ.
     ಶಿವಮೊಗ್ಗದ ಸೋಗಾನೆ ಸಮೀಪವಿರುವ ಹೊಸ ವಿಮಾನ ನಿಲ್ದಾಣದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಸುಮಾರು 25000 ಯೋಗಾಸಕ್ತರು ಹಾಗೂ ಯುವಜನರಿಂದ ಯೋಗ ಮಾಡುವ ಉದ್ದೇಶವಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ವೈಯಕ್ತಿಕ ಹಾಗೂ ಸಾಂಸ್ಥಿಕ ನೋಂದಣಿ ಮಾಡಬೇಕು. ಮೊಬೈಲ್ ಅಪ್ಲಿಕೇಷನ್ ಥಿogಚಿಣhoಟಿ 2022,  ಯುವ ನೋಂದಣಿಗೆ ಡಿegisಣeಡಿ@ಥಿogಚಿಣhoಟಿ2022.ಛಿom ಮತ್ತು ಯಾವುದೇ ಹೆಚ್ಚಿನ ಮಾಹಿತಿಗೆ iಟಿಜಿo@ಥಿogಚಿಣhoಟಿ2022.ಛಿom ನ್ನು ನೋಡಬೇಕು.


     ನಗರದ ಎಲ್ಲಾ ಪ್ರೌಢಶಾಲೆ, ಪದವಿಪೂರ್ವ, ಪದವಿ ಕಾಲೇಜು, ವೈದ್ಯಕೀಯ ಕಾಲೇಜು, ಆಯುರ್ವೇದ, ನರ್ಸಿಂಗ್ ಕಾಲೇಜುಗಳು, ತಾಂತ್ರಿಕ, ಕೃಷಿ, ವೈದ್ಯಕೀಯ ಮತ್ತು ಪಶುಪಾಲನಾ ಕಾಲೇಜಿನಿಂದ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳ ಪಟ್ಟಿ ತಯಾರಿಸಿ ಮುಖ್ಯಸ್ಥರ ಸಹಿಯೊಂದಿಗೆ ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಿ, ನಂತರ ಕ್ಯೂಆರ್ ಕೋಡ್‍ನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು.
     ಜಿಲ್ಲಾಡಳಿತದ ವತಿಯಿಂದ ಕಾರ್ಯಕ್ರಮಕ್ಕೆ ಕರೆದೊಯ್ಯಲು ಉಚಿತ ಬಸ್ ವ್ಯವಸ್ಥೆ ಮತ್ತು ಉಪಹಾರ ವ್ಯವಸ್ಥೆ ಹಾಗೂ ಎಲ್ಲ ಅಭ್ಯರ್ಥಿಗಳಿಗೆ ಉಚಿತ ಟೀ-ಶರ್ಟ್ ವ್ಯವಸ್ಥೆ ಮಾಡಲಾಗಿದೆ. ನೋಂದಣಿಯಾಗಿ ಭಾಗವಹಿಸಿದ ಎಲ್ಲರಿಗೂ ಗಿನ್ನಿಸ್ ದಾಖಲೆ ಪ್ರಮಾಣ ಪತ್ರ ನೀಡಲಾಗುವುದು. ಈ ಹಿಂದೆ ರಾಜಸ್ಥಾನ್‍ನಲ್ಲಿ 1.52 ಲಕ್ಷ ಜನ ಸೇರಿ ಯೋಗಥಾನ್ ಮಾಡಿ ಗಿನ್ನಿಸ್ ದಾಖಲೆ ಮಾಡಿದ್ದು, ಈ ದಾಖಲೆಯನ್ನು ಮುರಿಯಲು ಎಲ್ಲರೂ ಸಹಕರಿಸಬೇಕೆಂದರು.
   ಪತ್ರಿಕಾಗೋಷ್ಟಿಯಲ್ಲಿ ಜಿ.ಪಂ ಸಿಇಓ ಪ್ರಕಾಶ್, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್ ಹೊನ್ನಳ್ಳಿ ಇದ್ದರು.

Post a Comment

Previous Post Next Post