ಇಂಧನ ಹೊಂದಾಣಿಕೆ ಶುಲ್ಕ: ಅ.1 ರಿಂದ ಎಲ್ಲಾ ಎಸ್ಕಾಮ್ ಗಳಲ್ಲಿ ವಿದ್ಯುತ್ ದರ ಏರಿಕೆ, ಮತ್ತೆ ಜನರಿಗೆ ಕಾದಿದೆ ಶಾಕ್!

 ಅ.1 ರಿಂದ ರಾಜ್ಯದ ಜನತೆ ಹೆಚ್ಚು ವಿದ್ಯುತ್ ಬಿಲ್ ತೆರಬೇಕಾಗುತ್ತದೆ. 

ವಿದ್ಯುತ್ ಪೂರೈಕೆ (ಸಂಗ್ರಹ ಚಿತ್ರ)

By : Rekha.M
Online Desk

ಬೆಂಗಳೂರು: ಅ.1 ರಿಂದ ರಾಜ್ಯದ ಜನತೆ ಹೆಚ್ಚು ವಿದ್ಯುತ್ ಬಿಲ್ ತೆರಬೇಕಾಗುತ್ತದೆ. ಇಂಧನ ಹೊಂದಾಣಿಕೆ ಶುಲ್ಕ ಸರಿತೂಗಿಸುವ (ಎಫ್ಎಸಿ) ಭಾಗವಾಗಿ ವಿದ್ಯುತ್ ದರ ಹೆಚ್ಚಳವಾಗುತ್ತಿದ್ದು, ಎಲ್ಲಾ ಎಸ್ಕಾಮ್ ಗಳಲ್ಲಿ ವಿದ್ಯುತ್ ದರ ಹೆಚ್ಚಾಗಲಿದೆ. 

ಸೆ.19 ರಂದು ಕರ್ನಾಟಕದ ವಿದ್ಯುತ್ ನಿಯಂತ್ರಣ ಆಯೋಗ ಪ್ರಕಟಿಸಿ ಸೆ.23 ರಂದು ಬಿಡುಗಡೆ ಮಾಡಿರುವ ಆದೇಶದಲ್ಲಿ ಅ.1 ರಿಂದ ಮಾ.31, 2023 ವರೆಗೆ ಎಫ್ಎಸಿ ಭಾಗವಾಗಿ ವಿದ್ಯುತ್ ದರಗಳಲ್ಲಿ ಸರಿತೂಗಿಸಲು ಎಸ್ಕಾಮ್ ಗಳಿಗೆ ಅವಕಾಶ ನೀಡಬೇಕೆಂದು ಹೇಳಿದೆ.
 
ಆದೇಶದ ಪ್ರಕಾರ, ಬೆಸ್ಕಾಮ್ ವ್ಯಾಪ್ತಿಯಲ್ಲಿ ಗ್ರಾಹಕರಿ ಪ್ರತಿ ಯುನಿಟ್ ಗೆ 43 ಪೈಸೆ, ಮೆಸ್ಕಾಮ್ ನಲ್ಲಿ ಪ್ರತಿ ಯುನಿಟ್ ಗೆ 23 ಪೈಸೆ ಹೆಚ್ಚಳವನ್ನು ಗ್ರಾಹಕರು ಭರಿಸಬೇಕಾಗುತ್ತದೆ. ಸಿಎಸ್ ಎಸ್ ಸಿ ಯ ವ್ಯಾಪ್ತಿಗೆ ಬರುವ ಗ್ರಾಹಕರಿಗೆ ವಿದ್ಯುತ್ ದರ ಪ್ರತಿ ಯುನಿಟ್ ಗೆ 35 ಪೈಸೆ ಹಚ್ಚಳವಾಗಲಿದ್ದರೆ, ಹೆಸ್ಕಾಮ್ ಹಾಗೂ ಗೆಸ್ಕಾಮ್ ಗ್ರಾಹರಿಗೆ ಪ್ರತಿ ಯುನಿಟ್ ಗೆ 35 ಪೈಸೆ ಹೆಚ್ಚಳವಾಗಲಿದೆ. 

ಇದಕ್ಕೂ ಮುನ್ನ ಜುಲೈ 2022 ರಿಂದ ಡಿಸೆಂಬರ್ 2022 ರ ಅವಧಿಗೆ ಪ್ರತಿ ಯುನಿಟ್ ವಿದ್ಯುತ್ ದರವನ್ನು 21 ಪೈಸೆಯಿಂದ 31 ಪೈಸೆ ವರೆಗೆ ಏರಿಕೆ ಮಾಡಲು ಅನುಮತಿ ನೀಡಲಾಗಿತ್ತು. ಏಪ್ರಿಲ್ 1 ರಂದು ಕೆಇಆರ್ ಸಿ ಸರಾಸರಿ ವಿದ್ಯುತ್ ದರವನ್ನು ಪ್ರತಿ ಯುನಿಟ್ ಗೆ 35 ಪೈಸೆಯಷ್ಟು ಹೆಚ್ಚಳ ಮಾಡಿತ್ತು. ಕಲ್ಲಿದ್ದಲು ಹಾಗೂ ಸ್ಟಾಕ್ ಲಭ್ಯತೆಯ ಆಧಾರದಲ್ಲಿ ಬೆಲೆ ಏರಿಕೆ ಮಾಡಲಾಗುತ್ತದೆ. ಮಾರುಕಟ್ಟೆ ಸ್ಥಿರವಾದರೆ ಬೆಲೆ ಇಳಿಕೆಯಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.






Post a Comment

Previous Post Next Post