ನನ್ನನ್ನು ಬಲವಂತದಿಂದ ಕಾಂಗ್ರೆಸ್ ತೊರೆಯುವಂತೆ ಮಾಡಲಾಗಿದೆ ಎಂದು ಮಾಜಿ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಸೋಮವಾರ ಹೇಳಿದ್ದಾರೆ.
ಗುಲಾಂ ನಬಿ ಆಜಾದ್
ನವದೆಹಲಿ: ನನ್ನನ್ನು ಬಲವಂತದಿಂದ ಕಾಂಗ್ರೆಸ್ ತೊರೆಯುವಂತೆ ಮಾಡಲಾಗಿದೆ ಎಂದು ಮಾಜಿ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಸೋಮವಾರ ಹೇಳಿದ್ದಾರೆ.
ಮೋದಿ ಮನ್ನಿಸುವವರು, ಜಿ-23 ನಾಯಕರು ಪತ್ರ ಬರೆದಾಗಿನಿಂದಲೂ ಅವರು ನನ್ನೊಂದಿಗೆ ಸಂಪರ್ಕ ಹೊಂದಿದ್ದರು. ಕಾಂಗ್ರೆಸ್ ನಲ್ಲಿ ಹಲವು ಬಾರಿ ಸಭೆ ನಡೆದಿದೆ. ಆದರೆ, ಒಂದು ಸಲಹೆ ಕೂಡಾ ನೀಡಲಿಲ್ಲ. ನನನ್ನು ಬಲವಂತದಿಂದ ಕಾಂಗ್ರೆಸ್ ತೊರೆಯುವಂತೆ ಮಾಡಲಾಗಿದೆ ಎಂದು ಹೇಳಿರುವುದಾಗಿ ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಬಿಜೆಪಿ ಸೇರ್ಪಡೆಯನ್ನು ಅವರು ತಳ್ಳಿ ಹಾಕಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಇಂದು ಅರ್ಥಹೀನವಾಗಿದೆ ಎಂದ ಆಜಾದ್, ಪ್ರಧಾನಿ ಮೇಲೆ ವಾಗ್ದಾಳಿ ನಡೆಸುವ ರಾಹುಲ್ ಗಾಂಧಿ ಅವರ ನೀತಿಯನ್ನು ಟೀಕಿಸಿದರು.
ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಹೆಚ್ಚಾಗಿ ಸಮಾಲೋಚನಾತ್ಮಕ ರಾಜಕಾರಣದಲ್ಲಿ ನಂಬಿಕೆ ಹೊಂದಿದ್ದರು ಆದರೆ, ಇದನ್ನು ರಾಹುಲ್ ಗಾಂಧಿ ಹಾಳು ಮಾಡಿದರು ಎಂದು ಆಜಾದ್ ಆರೋಪಿಸಿದರು.
Post a Comment