ಶೇ. 40 ರಷ್ಟು ಕಮಿಷನ್ ನಿಂದ ಬಿಜೆಪಿ - ಆರ್ ಎಸ್ ಎಸ್ ಶ್ರೀಮಂತ: ಬಿ.ಕೆ ಹರಿಪ್ರಸಾದ್

 ಬಿಜೆಪಿಯು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು 8 ವರ್ಷಗಳಾಗಿವೆ. ನವದೆಹಲಿಯಲ್ಲಿ 1,600 ಕೋಟಿ ರು. ವೆಚ್ಚದಲ್ಲಿ ಕಚೇರಿ ನಿರ್ಮಿಸುವ ಜೊತೆಗೆ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಕಟ್ಟಲಾಗುತ್ತಿದೆ. ಇದಕ್ಕೆ ಹಣ ಎಲ್ಲಿಂದ ಬಂತು? ಕಮಿಷನ್‌ನಲ್ಲಿ ಪಾಲು ಹೋಗುತ್ತಿರುವುದರಿಂದ ಇದೆಲ್ಲವೂ ಸಾಧ್ಯವಾಗುತ್ತಿದೆ.

                        ಬಿ.ಕೆ ಹರಿಪ್ರಸಾದ್

By : Rekha.M
Online Desk

ಮೈಸೂರು: ಬಿಜೆಪಿಯು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು 8 ವರ್ಷಗಳಾಗಿವೆ. ನವದೆಹಲಿಯಲ್ಲಿ 1,600 ಕೋಟಿ ರು. ವೆಚ್ಚದಲ್ಲಿ ಕಚೇರಿ ನಿರ್ಮಿಸುವ ಜೊತೆಗೆ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಕಟ್ಟಲಾಗುತ್ತಿದೆ. ಇದಕ್ಕೆ ಹಣ ಎಲ್ಲಿಂದ ಬಂತು? ಕಮಿಷನ್‌ನಲ್ಲಿ ಪಾಲು ಹೋಗುತ್ತಿರುವುದರಿಂದ ಇದೆಲ್ಲವೂ ಸಾಧ್ಯವಾಗುತ್ತಿದೆ’  ಎಂದು ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಆರೋಪಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಗುತ್ತಿಗೆದಾರರಿಂದ ಪಡೆಯುತ್ತಿರುವ ಕಮಿಷನ್‌ನಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಹಾಗೂ ಆರ್‌ಎಸ್‌ಎಸ್‌ಗೂ ಪಾಲು ಹೋಗುತ್ತಿದೆ , ಗುತ್ತಿಗೆದಾರರಿಂದ ಶೇ. 40ರಷ್ಟು ಕಮಿಷನ್ ಪಡೆಯುತ್ತಿರುವ ಆರೋಪದ ಕುರಿತು ಸ್ವತಂತ್ರ ಆಯೋಗದಿಂದ ತನಿಖೆ ನಡೆಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಸಿದ್ದರಾಮಯ್ಯ ಸತ್ಯ ಹರಿಶ್ಚಂದ್ರರಾ ಎಂಬ ಬಸವರಾಜ್ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಶೇ 40ರಷ್ಟು ಕಮಿಷನ್ ವಿಚಾರದಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವರ್ಷದ ಹಿಂದೆಯೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ಹೀಗಾಗಿ, ಮತ್ತೊಮ್ಮೆ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಸತ್ಯಹರಿಶ್ಚಂದ್ರರೇ ಎಂದು ಕೇಳುವ ಬದಲಿಗೆ ಸ್ವತಂತ್ರ ಆಯೋಗವನ್ನು ರಚಿಸಿ ತನಿಖೆಗೆ ಆದೇಶಿಸಲು ಮುಖ್ಯಮಂತ್ರಿ ಕ್ರಮ ವಹಿಸಬೇಕು. ತನಿಖೆ ನಡೆಸಿದರೆ ಸತ್ಯಾಂಶ ಹೊರಬೀಳಲಿದೆ ಎನ್ನುವ ಭಯದಿಂದ ಬಿಜೆಪಿಯವರು ಆಪಾದನೆಯಲ್ಲಿ ತೊಡಗಿದ್ದಾರೆ’ ಎಂದು ಟೀಕಿಸಿದರು. ಪ್ರಧಾನಿಯು ಭ್ರಷ್ಟರನ್ನು ರಕ್ಷಿಸದೆ, ತನಿಖೆಗೆ ಆದೇಶಿಸಲಿ’ ಎಂದು ಸವಾಲು ಹಾಕಿದರು.

ಸ್ವಾತಂತ್ರ್ಯ ಚಳವಳಿಯಲ್ಲಿ ಬಿಜೆಪಿಯ ಯಾವ ನಾಯಕರೂ ಭಾಗಿಯಾಗಿಲ್ಲ. ಗಾಂಧಿಯನ್ನು ಕೊಂದ ಗೋಡ್ಸೆ ಬಿಜೆಪಿಯವರಿಗೆ ಆದರ್ಶವಾಗಿದ್ದಾರೆ. ಗೋಡ್ಸೆ ಒಬ್ಬ ಭಯೋತ್ಪಾದಕ, ವೀರ ಸಾವರ್ಕರ್ ಆತ ನಾಸ್ತಿಕನಾಗಿದ್ದ. ಗಣೇಶೋತ್ಸವದಲ್ಲಿ ಫೋಟೊ ಇಡುವುದು ಹಿಂದೂ ಧರ್ಮಕ್ಕೆ ಎಸಗುವ ಅಪಚಾರವಾಗುತ್ತದೆ’ ಎಂದರು. ಗಣೇಶೋತ್ಸವ ದೇವರಮೂರ್ತಿ ಜೊತೆ ನಾಸ್ತಿಕನ ಫೋಟೊ ಹಾಸ್ಯಸ್ಪದ. ವಿಡಿ ಸಾವರ್ಕರ್ ಆತ್ಮ ಚರಿತ್ರೆ ಸರಿಯಾಗೆ ಓದದೆ ಇರುವವರು ರಾಜಕೀಯ ಹಿತಾಸಕ್ತಿಗಾಗಿ  ಫೋಟೊ ಇಡುತ್ತಿದ್ದಾರೆ ಎಂದು ಹೇಳಿದ್ದಾರೆ.


    Post a Comment

    Previous Post Next Post