No title

 


*ಜಮೀರ್ @ ಬಚ್ಚಾ @ ಬಚ್ಚನ್ ಬಿನ್ ಚಾಂದ್ ಫೀರ್, 31 ವರ್ಷ, ಟಿಪ್ಪು ನಗರ, ಶಿವಮೊಗ್ಗ ಟೌನ್* ಈತನು ತನ್ನ 17ನೇ ವಯ್ಯಸ್ಸಿನಿಂದಲೇ ರೌಡಿ ಮತ್ತು ಸಮಾಜ ಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ತನ್ನ ಸಹಚರರೊಂದಿಗೆ ಅಕ್ರಮ ಕೂಟಕಟ್ಟಿಕೊಂಡು, ಮಾರಕಾಸ್ತ್ರವನ್ನು ಹಿಡಿದುಕೊಂಡು, ಕೊಲೆ ಪ್ರಯತ್ನ, ದರೋಡೆ, ಸುಲಿಗೆ, ಮೋಸ ಮತ್ತು ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿಪಡಿಸುವುದು ಮುಂತಾದ  ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುತ್ತಾನೆ. ಈತನ ವಿರುಧ್ದ *ಶಿವಮೊಗ್ಗ ಜಿಲ್ಲೆ, ಬೆಂಗಳೂರು ನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 22 ಅಪರಾಧ ಪ್ರಕರಣಗಳು*  ದಾಖಲಾಗಿರುತ್ತವೆ. ಈತನ ವಿರುದ್ಧ ರೌಡಿ ಹಾಳೆ ಮತ್ತು ಎಂಓಬಿ ಕಾರ್ಡ್ ಗಳನ್ನು ತೆರೆಯಲಾಗಿರುಗಿರುತ್ತದೆ ಮತ್ತು ಈತನ ಮೇಲೆ ಮುಂಜಾಗ್ರತಾ ಕ್ರಮದ ಅಡಿ ಪ್ರಕರಣ ದಾಖಲಿಸಿ ಬಾಂಡ್ ಓವರ್ ಮಾಡಿದ್ದರೂ ಬಾಂಡ್ ನ ಷರತ್ತುಗಳನ್ನು ಉಲ್ಲಂಘಿಸಿ ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗಿರುತ್ತಾನೆ ಆದ್ದರಿಂದ ಸಾಮಾನ್ಯ ಕಾನೂನು ಕ್ರಮಗಳಿಂದ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವುದನ್ನು ತಡೆಗಟ್ಟಲು ಸಾದ್ಯವಾಗದೇ ಇರುವುದರಿಂದ ಈತನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧನದಲ್ಲಿಡುವಂತೆ ಕೋರಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ಶಿವಮೊಗ್ಗ ರವರಿಗೆ ಪ್ರಸ್ಥಾವನೆ ಸಲ್ಲಿಸಿದ ಮೇರೆಗೆ ಮಾನ್ಯ ಜಿಲ್ಲಾಧಿಕಾರಿಗಳು *ಸದರಿ ವ್ಯಕ್ತಿಯ ವಿರುದ್ಧ ಬಂಧನ ಆಜ್ಞೆಯನ್ನು ಹೊರಡಿಸಿ ಕೇಂದ್ರ ಕಾರಾಗೃಹ ಕಲಬುರಗಿಯಲ್ಲಿ* ಇರಿಸಲು ಆದೇಶಿಸಿರುತ್ತಾರೆ. ನಂತರ ದಿನಾಂಕಃ-20-08-2022 ರಂದು ಗೂಂಡಾ ಕಾಯ್ದೆ ಅಧಿನಿಯಮದಡಿ ರಚಿತವಾದ ಸಲಹಾ ಮಂಡಳಿಯು ಜಮೀರ್ @ ಬಚ್ಚಾ @ ಬಚ್ಚನ್ ಈತನನ್ನು ಬಂಧನದಲ್ಲಿಡಲು ಸಾಕಷ್ಟು ಕಾರಣಗಳಿವೆ ಎಂದು ಅಭಿಪ್ರಾಯಪಟ್ಟು ವರದಿ ನೀಡಿದ ಮೇರೆಗೆ, ದಿನಾಂಕಃ-26-08-2022 ರಂದು ಘನ ಕರ್ನಾಟಕ ಸರ್ಕಾರವು ಸದರಿ ಆದೇಶವನ್ನು ಸ್ಥಿರೀಕರಿಸಿ, ಸದರಿ ವ್ಯಕ್ತಿಯ ಬಂಧನದ ಆದೇಶವನ್ನು *ದಿನಾಂಕಃ-15-07-2022 ರಿಂದ 1 ವರ್ಷದ ಅವಧಿಯವರೆಗೆ ಮುಂದುವರೆಸಿ ಆದೇಶಿಸಿರುತ್ತದೆ.* 


ಕಳೆದ 06 ತಿಂಗಳಲ್ಲಿ ಗೂಂಡಾ ಕಾಯ್ದೆಯ ಅಡಿಯಲ್ಲಿ *1) ಜಮೀರ್ @ ಬಚ್ಚಾ @ ಬಚ್ಚನ್* ಬಿನ್ ಚಾಂದ್ ಫೀರ್, 31 ವರ್ಷ, ಟಿಪ್ಪು ನಗರ, ಶಿವಮೊಗ್ಗ ಟೌನ್, *2) ಸಲೀಂ @ ಚೋರ್ ಸಲೀಂ* ಬಿನ್ ಅಬ್ದುಲ್ ಬಷೀರ್, 36 ವರ್ಷ, ಸೂಳೆಬೈಲು, ಶಿವಮೊಗ್ಗ ಟೌನ್ ಮತ್ತು *3) ಅಬೀದ್ ಖಾನ್ @ ಕಡೇಕಲ್ ಅಬೀದ್* ಬಿನ್ ಲೇಟ್ ಮುನಾವರ್ ಖಾನ್, 34 ವರ್ಷ, ಕಡೇಕಲ್ ಗ್ರಾಮ ಶಿವಮೊಗ್ಗ ತಾಲ್ಲೂಕು ರವರುಗಳ ಬಂಧನದ ಅವಧಿಯನ್ನು 01 ವರ್ಷದ ಅವಧಿಗೆ ಮುಂದುವರೆಸಿ ಘನ ಕರ್ನಾಟಕ ಸರ್ಕಾರವು ಆದೇಶಿಸಿರುತ್ತದೆ.


ರೌಡಿ ಮತ್ತು ಸಮಾಜ ಘಾತುಕ ಚಟುವಟಿಕೆಗಳಲ್ಲಿ ಹಾಗೂ ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗಿರುವ ಕೆಲವು ವ್ಯಕ್ತಿಗಳ ವಿರುದ್ಧ *ಗೂಂಡಾ ಕಾಯ್ದೆಯಡಿಯಲ್ಲಿ ಬಂಧನಕ್ಕಾಗಿ ಈಗಾಗಲೇ ಪ್ರಸ್ಥಾವನೆಯನ್ನು* ಸಲ್ಲಿಸಲಾಗಿರುತ್ತದೆ ಹಾಗೂ ಇದೇ ರೀತಿಯ ಕೃತ್ಯಗಳಲ್ಲಿ ತೊಡಗಿರುವುದು ಕಂಡು ಬಂದಲ್ಲಿ ಅಂತಹವರ ಮೇಲೆ *ಗೂಂಡಾ ಕಾಯ್ದೆಯಡಿಯಲ್ಲಿ ಕಾನೂನು ರೀತ್ಯಾ ಕ್ರಮ* ಕೈಗೊಳ್ಳಲಾಗುವುದು.

   


Post a Comment

Previous Post Next Post