No title


      ದಿನಾಂಕಃ-10-02-2019 ರಂದು ಸಂಜೆ ಭದ್ರಾವತಿ ಪೇಪರ್‌ ಟೌನ್‌ ಪೊಲೀಸ್‌ ಠಾಣಾ ವ್ಯಾಪ್ತಿಯ *ಬಾಳೆ ಮಾರನಹಳ್ಳಿ ಗ್ರಾಮದ ಮಹಿಳೆಯೊಬ್ಬರು* ತಮ್ಮ ಮನೆಯ ಹಿತ್ತಲಿನಲ್ಲಿ ಪಾತ್ರೆ ತೊಳೆಯುತ್ತಿರುವಾಗ *ತಿಮ್ಲಾಪುರ ಗ್ರಾಮದ ವಾಸಿ ರುದ್ರನಾಯ್ಕ ರವರ ಮಗನಾದ ಜಯ @ ಸುನಿಲ್‌* ಎಂಬ ವ್ಯಕ್ತಿಯು ಹಿಂದಿನಿಂದ ಬಂದು *ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಮತ್ತು ಬೆಳ್ಳಯ ಕರಡಿಗೆಯನ್ನು ಕಿತ್ತುಕೊಂಡು ಮಹಿಳೆಯನ್ನು ತಳ್ಳಿ ಬೀಳಿಸಿ* ಓಡಿ ಹೋಗಿದ್ದು, ಈ ಬಗ್ಗೆ ಗುನ್ನೆ ಸಂಖ್ಯೆ 0028/2019 ಕಲಂ 397 ಐಪಿಸಿ ರೀತ್ಯಾ ಪ್ರಕರಣ  ದಾಖಲಿಸಿಕೊಳ್ಳಲಾಗಿರುತ್ತದೆ.


ಆಗಿನ ತನಿಖಾಧಿಕಾರಿಗಳಾದ *ಯೋಗೇಶ ಕೆ ಎಂ, ಸಿಪಿಐ ಭದ್ರಾವತಿ ಗ್ರಾಮಾಂತರ ವೃತ್ತ* ರವರು ಪ್ರಕರಣದ ತನಿಖೆ ಕೈಗೊಂಡು ಆರೋಪಿತನ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ.


ಪ್ರಕರಣದಲ್ಲಿ *ಶ್ರೀಮತಿ ರತ್ನಮ್ಮ, ಸರ್ಕಾರಿ ಅಭಿಯೋಜಕರವರು* ವಾದ ಮಂಡಿಸಿದ್ದು, *ಮಾನ್ಯ 4ನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗ ಪೀಠಾಸೀನ ಭದ್ರಾವತಿಯಲ್ಲಿ* ಪ್ರಕರಣದ ವಿಚಾರಣೆ ನಡೆದು *ಮಾನ್ಯ ನ್ಯಾಯಧೀಶರಾದ ಶ್ರೀ ಶಶಿಧರ್* ರವರು ದಿ:29-08-2022 ರಂದು ಆರೋಪಿತನಾದ *ಜಯಾ ನಾಯ್ಕ @ ಸುನಿಲ್‌ ಬಿನ್‌ ರುದ್ರಾನಾಯ್ಕ, 23 ವರ್ಷ, ತಿಮ್ಲಾಫುರ ತಾಂಡಾ, ಭದ್ರಾವತಿ ತಾಲ್ಲೂಕು* ಈತನ ವಿರುದ್ಧ ಕಲಂ 397 ಐಪಿಸಿ ಕಾಯ್ದೆ ಅಡಿಯಲ್ಲಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿತನಿಗೆ *07 ವರ್ಷ ಕಠಿಣ ಕಾರಾಗೃಹ ಶಿಕ್ಷೆ* ನೀಡಿ ಆದೇಶ ನೀಡಿರುತ್ತಾರೆ.


Post a Comment

Previous Post Next Post